ರೈತರ 2 ಲಕ್ಷ ರೂ.ವರೆಗಿನ ಸಾಲ ಮನ್ನಾ : ಕುಮಾರಸ್ವಾಮಿ

news_441

ಯುವಾರಾಜ್ಯ ನ್ಯೂಜ : ಬೆಂಗಳೂರು

ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಿದ ಸಿಎಂ ಕುಮಾರಸ್ವಾಮಿ ಅವರು, ಸಹಕಾರಿ ಬ್ಯಾಂಕ್ ಗಳಲ್ಲಿರುವ ರೈತರ ಸುಮಾರು 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ.

ರಾಜ್ಯ ಸರ್ಕಾರ ಒಟ್ಟು 34 ಸಾವಿರ ಕೋಟಿ ರೂ.ಗಳ ವರೆಗಿನ ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದೆ ಎಂದು ಕುಮಾರಸ್ವಾಮಿ ಹೇಳಿದರು.

ಕುಮಾರಸ್ವಾಮಿಯ ಚೊಚ್ಚಲ ಬಜೆಟ್​ನ ಹೈಲೇಟ್ಸ್ ಇಲ್ಲಿದೆ.

- 2 ಲಕ್ಷದವರೆಗಿನ ಸಾಲಮನ್ನಾ, 34 ಸಾವಿರ ಕೋಟಿ ಹೊರೆ

-ಪೆಟ್ರೋಲ್ , ಮೇಲಿನ ಸೆಸ್ 30ರಿಂದ 32ಕ್ಕೆ ಏರಿಕೆ, ಪೆಟ್ರೋಲ್ ಬೆಲೆ 1.14 ರೂ. ಡೀಸೆಲ್ ಬೆಲೆ 1.12 ರೂ ಏರಿಕೆ
-ಕಲಬುರಗಿ, ಬೆಳಗಾವಿ, ಮೈಸೂರು ನಗರಗಳಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ರೋಗಿಗಳಿಗಾಗಿ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಮನಗರ ಜಿಲ್ಲೆ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ, ಗದಗ, ಕೊಪ್ಪಳ, ಚಾಮರಾಜನಗರ ಮತ್ತು ಹಾಸನ ನಗರಗಳ ವೈದ್ಯಕೀಯ ಕಾಲೇಜುಗಳಲ್ಲಿ 450 ಹಾಸಿಗೆಗಳ ಆಸ್ಪತ್ರೆಗಳನ್ನು ಪ್ರಾರಂಭಿಸಲು ಸರ್ಕಾರ ತೀರ್ಮಾನಿಸಿದೆ.
- ರಾಮನಗರದಲ್ಲಿ 300 ಹಾಸಿಗೆಗಳ ಸೂಪರ್‍ಸ್ಪೇಷಾಲಿಟಿ ಆಸ್ಪತ್ರೆ ತೆರೆಯಲು 40 ಕೋಟಿ ಮೀಸಲಿರಿಸಲಾಗಿದೆ.

--ಕೋಲಾರ,ಚಿತ್ರದುರ್ಗ,ಕೊಪ್ಪಳ,ಗದಗ ಜಿಲ್ಲೆಗಳಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ.೫೦೦೦ ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ನೀರಾವರಿ ಸೌಲಭ್ಯ.೧೫೦ ಕೋಟಿ ಮೀಸಲು
--ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ, ಪ್ರಾಯೋಗಿಕವಾಗಿ 1000 ಶಾಲೆಗಳಲ್ಲಿ ಪ್ರಾರಂಭ
--ದಾಸೋಹ, ಶಿಕ್ಷಣ, ಸಮಾಜಸೇವೆಯ ಮಠಗಳಿಗೆ 25 ಕೋಟಿ ಅನುದಾನ.
---ಬೆಂಗಳೂರು ಅಭಿವೃದ್ಧಿಗೆ ಬಜೆಟ್ ನಲ್ಲಿ ಹೆಚ್ಚಿನ ಒತ್ತು. ಬೆಳ್ಳಂದೂರು ಕೆರೆ ಪುನಶ್ಚೇತನಕ್ಕಾಗಿ ೫೦ ಕೋಟಿ ಅನುದಾನ

05-Jul-2018Yuvarajya News Network
Top