ಬಸ ಸೌಲಭ್ಯ ನೀಡಿ ; ಇಲ್ಲದೆ ಆನಾಹುತಕ್ಕೆ ತಾವೇ ಜವಾಬ್ದಾರರು : ಕರವೇ - ಯುವಾರಾಜ್ಯ ನ್ಯೂಸ

news_497

ಸದಲಗಾದಲ್ಲಿ ಬಸ ಸೌಲಭ್ಯ ಒದಗಿಸಲು ಮನವಿ

ಯುವಾರಾಜ್ಯ ನ್ಯೂಸ : ಸದಲಗಾ

ನಿಯಮ ಮಿರಿ ಬಸ್ಸುಗಳಲ್ಲಿ ವಿಧ್ಯಾರ್ಥಿ, ಪ್ರಯಾಣಿಕರ ಸರಕು ನಡಿತಾಯಿದೆ. ಆದರೆ ಈ ಬಗ್ಗೆ ಸದರಿ ಸಾರಿಗೆ ಆಧಿಕಾರಿಗಳು ಯಾವುದೆ ಗಮನ ಕೊಡದೆ ಇರುವುದು ವಿಷಾದನಿಯ ಸಂಗತಿವಾಗಿದೆ. ಇದನ್ನು ತಡೆಗಟ್ಟಲು ತಕ್ಷಣ ಹೆಚ್ಚಿಗೆ ಬಸ ಸೌಲಭ್ಯ ಒದಗಿಸಬೆಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸದಲಗಾ ಘಟಕದಿಂದ ಬಸ ನಿಲ್ದಾಣ ನಿಯಂತ್ರಕರ ಮುಖಾಂತರ ಚಿಕ್ಕೊಡಿ ಸಾರಿಗೆ ಆಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಾರಿಗೆ ನಿಯಮದಂತೆ ಒಂದು ಸಾರಿಗೆ ಬಸನಲ್ಲಿ ಕೆವಲ 64 ಸೀಟು ತೆಗೆದುಕೊಂಡ ಹೊಗುವ ನಿಯಮ ಇದೆ. ಆದರೆ ಕೆವಲ ಸದಲಗಾ ಪಟ್ಟಣದಲ್ಲಿನ ಸುಮಾರು 600 ಕ್ಕೆ ಹೆಚ್ಚು ವಿದ್ಯಾರ್ಥಿಗಳು ಬಸ ಪಾಸನ್ನು ಪಡೆದಿದ್ದಾರೆ. ಇದರಿಂದ ಶಾಲಾ, ಮಹಾವಿದ್ಯಾಲಯಗಳಿಗೆ ಹೊಗುವ ಸಂದರ್ಭದಲ್ಲಿ ಒಂದು ಬಸನಲ್ಲಿ 80 ಕ್ಕೆ ಹೆಚ್ಚು ವಿದ್ಯಾರ್ಥಿ ಪ್ರಯಾಣ ಮಾಡುತ್ತ ಇರುತ್ತಾರೆ. ಆದರೆ ಈ ಕಡೆ ಸಾರಿಗೆ ಆಧಿಕಾರಿಗಳು ಗಮನ ಕೊಡದೆ ಇರುವುದು ವಿಷಾದನಿಯ. ಇಂತಹ ಸಂದರ್ಬದಲ್ಲಿ ವಿದ್ಯಾರ್ಥಿಗಳ ಎನಾದರೆ ಆನಾಹುತ ಪ್ರಾಣಹಾನಿ ಆದರೆ ಆದಕ್ಕ ತಾವೇ ಜವಾಬ್ದಾರರು ಎಂದು ಮನವಿಯನ್ನು ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.

ಈ ವೆಳೆ ಕರವೇ ಸದಲಗಾ ಘಟಕ ಆಧ್ಯಕ್ಷ ಸಂಜು ಲಠ್ಠೆ, ವೈಭವ ಪಾಟಿಲ, ಆಮಿತ ಹಣಬರ, ಸಚಿನ ಕೊಲ್ಹಾಪುರೆ, ಆಶುತೋಷ ಲೊಕರೆ, ಒಂಕಾರ ಸರವಡೆ ಸೆರಿದಂತೆ, ಕರವೆ ಘಟಪ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಿಮ್ಮ ಪರಿಸರದಲ್ಲಿ ಇರುವ ಸುದ್ದಿಗಳಿಗೆ ನಮ್ಮ 7028140801 ಈ Whats app ನಂಬರಗೆ ಕರೆ ಮಾಡಿ.

ತಾಜಾ ಸುದ್ದಿಗಳಿಗಾಗಿ Log in ಮಾಡಿ www.yuvarajyanews.com

28-Jul-2018ಸದಲಗಾ Yuvarajya News Network
Top